ನನ್ನ ನಿನ್ನ ಪ್ರೇಮಕಥೆ ಜುಲೈನಲ್ಲಿ ತೆರೆಗೆ
Posted date: 23 Thu, Jun 2016 – 08:37:47 AM

 ಎ.ಬಿ. ಸಿನಿಮಾ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಆನಂದ.ಸಿ.ನ್ಯಾಮಗೌಡ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ನನ್ನ ನಿನ್ನ ಪ್ರೇಮಕಥೆ ಚಿತ್ರವು ಸದ್ಯದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ.
ಚಿತ್ರವು ಈ ವಾರ ಸೆನ್ಸಾರ್ ಮುಂದೆ ಹೋಗಲಿದ್ದು, ಚಿತ್ರದ ಆಡಿಯೋ ಈಗಾಗಲೇ ಸೂಪರ್‌ಹಿಟ್ ಆಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಚಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತಕ್ಕೆ ಮೊಹಮದ್ ಹಸೀಬ್ ಛಾಯಾಗ್ರಹಣ, ಸುಭಾಷ್ ಕಡಕೋಳ್ ಕಲೆ, ಮದನ್ ಹರಿಣಿ ನೃತ್ಯ, ಮಾಸ್ ಮಾದ ಸಾಹಸ, ದಾಮೋಧರ್ ಕಾನಸೂರು ಸಂಕಲನ, ಭರತ್ ನಿರ್ಮಾಣ ನಿರ್ವಹಣೆ ಇದ್ದು, ಚಿತ್ರದ ಕಥೆ, ಸಂಗೀತ ಸಾಹಿತ್ಯ ಶಿವು ಜಮಖಂಡಿ, ಜೋಕರ್ ಹನುಮಂತು ಹಾಗೂ ಧನಂಜಯ್ ಚಿತ್ರದ ಸಹ ನಿರ್ಮಾಪಕರು.
ತಾರಾಗಣದಲ್ಲಿ ವಿಜಯ್ ರಾಘವೇಂದ್ರ, ನಿಧಿ ಸುಬ್ಬಯ್ಯ, ತಿಲಕ್ ಶೇಖರ್, ಸುಧಾ ಬೆಳವಾಡಿ, ಚಿಕ್ಕಣ್ಣ, ರಚನಾ, ಗುರುರಾಜ್ ಹೊಸಕೋಟೆ, ಸಂಗೀತ, ಜೋಕರ್ ಹನುಮಂತು, ಮೂಗೂರ್ ಸುರೇಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed